ಚೇತನಾ ತೀರ್ಥಹಳ್ಳಿ
ಚೇತನಾ ತೀರ್ಥಹಳ್ಳಿ ಆಗಷ್ಟ್ 15, 1979 ರಲ್ಲಿ ತೀರ್ಥಹಳ್ಳಿಯಲ್ಲಿ ಜನಿಸಿದರು. ಇವರ ಹುಟ್ಟು ಹೆಸರು ಗಾಯತ್ರಿ, ಮುಂದೆ ಲೇಖಕಿಯಾದಾಗ ಇವರು ತಮ್ಮ ಹೆಸರನ್ನು ಚೇತನಾ ತಿರ್ಥಹಳ್ಳಿ ಎಂದು ಬದಲಾಯಿಸಿಕೊಂಡರು. ಅಲಾವಿಕಾ ಈ ಹೆಸರಿನಲ್ಲಿ ಒಂದು ‘ಇ – ಪುಸ್ತಕ’ವನ್ನೂ ಪ್ರಕಟಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯ ಸೇಂಟ್ ಮೇರೀಸ್ ಶಾಲೆಯಲ್ಲಿ ಮತ್ತು ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಮುಗಿಸಿದರು. ತೀರ್ಥಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ತುಂಗಾ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿಪೂರ್ವಶಿಕ್ಷಣ ಪಡೆದರು.
ಚೇತನಾ ತೀರ್ಥಹಳ್ಳಿಯವರು ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಆನಂದಕ್ಕೊಂದು ಮಿಸ್ಟ್ ಕಾಲ್ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ ಎನ್ ಯು ಭಾಷಣಗಳ ಅನುವಾದ), ಅವಳವನು – ಅವನವಳು (ನಾಟಕ : ಅಪ್ರಕಟಿತ) ಹೀಗೆ ಹಲವಾರು 15 ಕ್ಕೂ ಹೆಚ್ಚು ಪುಸ್ತಕಗಳನ್ನೂ ಬರೆದಿದ್ದರೆ.
ತೀರ್ಥಹಳ್ಳಿಯು ಜಲಪಾತಗಳು, ಕಾಡುಗಳು ಮತ್ತು ಬೆಟ್ಟಗಳು ಸೇರಿದಂತೆ ಸುಂದರವಾದ ನೈಸರ್ಗಿಕ ತಾಣಗಳಿಂದ ಆವೃತವಾಗಿದೆ, ಇದು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣವಾಗಿದೆ. ಈ ಪ್ರದೇಶದ ಪ್ರಶಾಂತ ವಾತಾವರಣ ಮತ್ತು ಆಹ್ಲಾದಕರ ವಾತಾವರಣವು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.